Sunday, December 13, 2015

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ(Hindu Spiritual and Service Fair) - 2015

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಇದೇ ಡಿಸೆಂಬರ್ 9ರಿಂದ 13ರವರೆಗೆ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ Hindu Spiritual and Service Fair​ ನಡೆಯಿತು. ಈ 5 ದಿನಗಳ ಅಭೂತಪೂರ್ವ ಕಾರ್ಯಕ್ರಮವೊಂದಕ್ಕೆ ಇಂದು ತೆರೆ ಬಿದ್ದಿದೆ. ಈ ಕಾರ್ಯಕ್ರಮದ ಸ್ವರೂಪ, ಅಂದರೆ "What exactly it was ?" ಎಂಬ ಪ್ರಶ್ನೆಗೆ ಖಂಡಿತ ಸಾಮಾನ್ಯನಿಗೆ ಕೆಲವೇ ವಾಕ್ಯಗಳಲ್ಲಿ ಉತ್ತರ ಕೊಡಲು ಸಾಧ್ಯವಿಲ್ಲ, ಅಂತಹ ಪ್ರಯತ್ನ ಮಾಡಿದರೆ ಅದು ಖಂಡಿತ ಕುರುಡನೊಬ್ಬ ಆನೆಯ ವಿವರಣೆ ಕೊಟ್ಟಂತಾಗುತ್ತದೆ. ಒಂದು ಮಾತ್ರ ಸತ್ಯ, ಬೆಂಗಳೂರಿನಲ್ಲಿ ಇದ್ದೂ ಈ ಕಾರ್ಯಕ್ರಮ ತಪ್ಪಿಸಿಕೊಂಡವರು ತುಂಬಲಾರದ ನಷ್ಟ ಅನುಭವಿಸಿದ್ದಾರೆ.
ಸೇವೆಯ ಸೇತುವೆ ಕಟ್ಟಲು ಬನ್ನಿ..
ಇದು ವಿವಿಧ ಸಣ್ಣ ಪುಟ್ಟ ಸೇವಾ ಸಂಸ್ಥೆಗಳಿಗೆ ತಾವು ಸಾಗಿಬಂದ ಹಾದಿಯನ್ನು, ಮುಂದಿರುವ ಗುರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಒಂದು ವೇದಿಕೆಯಾಗಿತ್ತು. ಬುಡಕಟ್ಟು ಜನಾಂಗದ ನಡುವೆ, ಸಮಾಜದಲ್ಲಿ ಶೋಷಿತರ ನಡುವೆ, ವೃದ್ದರ ನಡುವೆ, ವಿಕಲಾಂಗರ ನಡುವೆ, ಅವಕಾಶ ವಂಚಿತರ ನಡುವೆ ಶಿಕ್ಷಣ,ಆರೋಗ್ಯ, ಕಲೆ, ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು, ಹೀಗೆ ಎಲ್ಲ ಕ್ಷೇತ್ರಗಳನ್ನೂ ಪ್ರತಿನಿಧಿಸುತ್ತಿದ್ದ ಸಂಘಸಂಸ್ಥೆಗಳಿದ್ದವು. ತನ್ಮೂಲಕ ಅಲ್ಲಿಗೆ ಬಂದಿದ್ದ ಲಕ್ಷಾಂತರ ವಿದ್ಯಾರ್ಥಿಗಳು, ಯುವಕರು, ಜನಸಾಮಾನ್ಯರಿಗೆ ನಾವು ಹೀಗೂ ಸಮಾಜಸೇವೆ ಮಾಡಬಹುದು, ಸೇವೆಯ ಮೂಲಕ ಸಮಾಜದ ಬಿರುಕುಗಳ ನಡುವೆ ಸೇತುವೆಗಳಾಗಬಹುದು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು.

ಗುರಿಯೊಂದು, ದಾರಿಗಳನೇಕ...
ನಮ್ಮ ಹಿಂದೂ ನಂಬಿಕೆಗಳ ಪ್ರಕಾರ ದೇವರನ್ನು ತಲುಪಲು ಹಲವಾರು ದಾರಿಗಳಿವೆ. ಕೆಲವರು ತೋರಿಕೆಯ ಆಚರಣೆಗಳ ಮೂಲಕ, ಇನ್ನೂ ಕೆಲವರು ಕೇವಲ ಧ್ಯಾನದ ಮೂಲಕ ದೇವರನ್ನು ಕಾಣಲು ಯತ್ನಿಸುತ್ತಾರೆ. ಕೆಲವರು ವಿಗ್ರಹಾರಾಧನೆ ಮಾಡಿದರೆ ಇನ್ನೂ ಕೆಲವರಿಗೆ ವಿಗ್ರಹಾರಧಾನೆ ವರ್ಜ್ಯ. ಇಂತಹ ಎಲ್ಲ ಮತ ಪಂಥಗಳ ಅನುಯಾಯಿಗಳು ಒಂದೇ ಸೂರಿನಡಿ ಇದ್ದುದು ವಿಶೇಷ. ಒಟ್ಟಿನಲ್ಲಿ ಹಿಂದೂ ಆಧ್ಯಾತ್ಮಿಕತೆ ಎಂಬ ಆಲದ ಮರದ ಎಲ್ಲ ಬಿಳಲುಗಳಿಗೆ ತಮ್ಮ ಕಾರ್ಯವನ್ನು, ತತ್ವ-ಸಿದ್ದಾಂತಗಳನ್ನು ಪ್ರಚುರಪಡಿಸಲು ಒಂದು ಬೃಹತ್ ವೇದಿಕೆಯಾಗಿತ್ತು.  ಭಗವಂತನನ್ನು ಆರಾಧಿಸಲು ಇಷ್ಟೊಂದು ದಾರಿಗಳಿವೆ ಎಂದು ಹುಬ್ಬೇರಿಸುವ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು.
ಒಟ್ಟಿನಲ್ಲಿ ಮೇಲಿನ ಎರಡು ವಿಭಾಗಗಳಿಗೆ 200ಕ್ಕೂ ಹೆಚ್ಚು ಮಳಿಗೆಗಳು ಮೀಸಲಾಗಿದ್ದವು

ಸಮಗ್ರ ವಿಷಯ ದರ್ಶಿನೀ
ಆಸಕ್ತಿಯಿಂದ ಪ್ರದರ್ಶಿಯನ್ನು ವೀಕ್ಷಿಸುತ್ತಿದ್ದ ಜನರು
ವಿಶಾಲವಾದ ಆವರಣದಲ್ಲಿ ಎರಡು ಆಕರ್ಷಕ ಮಂಟಪಗಳಲ್ಲಿ ನಮ್ಮ ಆಚರಣೆಗಳು, ಸಾಧನೆಗಳನ್ನು ತಿಳಿಸುವ ಪ್ರದರ್ಶಿನಿಗಳು ಗಮನಸೆಳೆದವು.











ಕೇಂದ್ರ ಬಿಂದು - ಸಂಸ್ಕೃತಿಯ ದರ್ಪಣ
ಆವರಣದ ಮಧ್ಯದಲ್ಲಿ ಕೆಲವೇ ದಿನಗಳ ಹಿಂದೆ ಹೆದ್ದಾರಿ ಅಗಲೀಕರಣಕ್ಕೆ ಕಡೆಯಲ್ಪಟ್ಟ ಮರವೊಂದು ಎಲ್ಲರ ಮನಸೂರೆಗೊಂಡಿತ್ತು. ಮರದ ಸುತ್ತಮುತ್ತ ಮೊಲಗಳು, ಪಾರಿವಾಳಗಳು ಓಡಾಡಿಕೊಂಡಿದ್ದವು. ಮರದ ಬಿಳಲುಗಳು ಪ್ರಕೃತಿ ವಂದನೆ, ಮಾತೃ ವಂದನೆ, ಹಿರಿಯರ ವಂದನೆ, ಗೋವಂದನೆ ಹಾಗೂ ಇತರ ಕರ್ತವ್ಯಗಳನ್ನು ಬಿಂಬಿಸುತ್ತಿದ್ದವು.




ಹಲವು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಬೃಹತ್ ವೇದಿಕೆ
ಮಳಿಗೆಗಳಿದ್ದ ಆವರಣದ ಪಕ್ಕದಲ್ಲೇ ಬೃಹತ್ ವೇದಿಕೆಯೊಂದು ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಹಲವಾರು ಗುರುಹಿರಿಯರ ಆಶೀರ್ವಚನ, ಸಂಗೀತ ವಿದ್ವಾಂಸರ ಕಛೇರಿಯ ರಸದೌತಣ, ನಾಟ್ಯಕಾರರ ನಾಟ್ಯವಿಸ್ಮಯ, ನಾಟಕಕಾರರಿಂದ ಜನ ಜಾಗೃತಿಯ ಸಂದೇಶ. ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜರುಗಿದವು. ಪ್ರತೀದಿನ ಸಮಾಜ ಜಾಗೃತಿಯ ಒಂದು ವಿಷಯ ತೆಗೆದುಕೊಂಡು ಪರಿಣಾಮಕಾರಿಯಾಗಿ ಯುವ ಪೀಳಿಗೆಗೆ ಮುಟ್ಟಿಸುವ ಕಾರ್ಯ ಜರುಗಿತು. ಗುರುವಂದನಾ, ಗೋವಂದನಾ, ಮಹಾವೀರ ವಂದನಾ ( ದೇಶಕ್ಕೋಸ್ಕರ ಹೋರಾಡುವವರಿಗೆ ಕೃತಜ್ಞತೆ ಸಲ್ಲಿಸುವ ಪ್ರಯತ್ನ. 1965ರ ಯುದ್ದದ 50ನೇ ವರ್ಷಾಚರಣೆ ) ಮಾತೃವಂದನಾ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು
ಮಹಾವೀರ ವಂದನಾ - ಪ್ರಯುಕ್ತ 1965ರ ಯುದ್ದದಲ್ಲಿ ಪಾಲ್ಗೊಂಡಿದ್ದ ಯೋಧರೊಬ್ಬರಿಗೆ ಸನ್ಮಾನ ಮಾಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಚಕ್ರವರ್ತಿ ಸೂಲಿಬೆಲೆ, ವಿಜಯ ಸಂಕೇಶ್ವರ ಮತ್ತು ಗಣ್ಯರು

ಮಹಾವೀರ ವಂದನಾ - ಸಮಯದಲ್ಲಿ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದ ಸಾರ್ವಜನಿಕರು
ಮುಂದಿನ ಪೀಳಿಗೆಯನ್ನು ರೂಪಿಸುವ ಕುಲುಮೆ
ಐದು ದಿನಗಳಲ್ಲಿ ಹಲವಾರು ಶಾಲೆಗಳಿಂದ ಮಕ್ಕಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಾಲಾ-ಕಾಲೇಜು ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಕಾಲೇಜು ಮಕ್ಕಳಿಗೆ ಹಲವಾರು ಅಮೋಘ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳಿಗೆ ನಮ್ಮ ನಾಡಿನ ಆಟಗಳನ್ನು ತಿಳಿಸಿಕೊಡಲಾಯಿತು. ಪ್ರಕೃತಿ ರಕ್ಷಣೆಯ ವಿಚಾರವಾಗಿ ಕೆಲಸ ಮಾಡುತ್ತಿದ್ದ ಕೆಲವು ಸಂಸ್ಥೆಗಳು ಮಕ್ಕಳಿಗೆ ಸಸಿಗಳನ್ನು ವಿತರಿಸಿ "ಪ್ರಕೃತಿ ವಂದನೆ"ಯ ಮಹತ್ವ ಭೋದಿಸಿದರು. ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಎಲ್ಲ ಸಂದೇಶಗಳನ್ನು ತಲುಪಿಸುವ ಬೃಹತ್ ಪ್ರಯತ್ನ ನಡೆದಿದೆ ಎನ್ನಬಹುದು.

ರುಚಿಭರಿತ ತಿನಿಸು ಅಂಗಳ
ಸ್ವದೇಶಿ ಜಾಗರಣ ಮಂಚ್ ನ ಮುಂದಾಳತ್ವದಲ್ಲಿ ರೂಪುಗೊಂಡಿದ್ದ ತಿನಿಸು ಅಂಗಳ ಬಂದವರ ಮನ ಸೂರೆಗೊಂಡಿತು. ನಮ್ಮ ಸಾಂಪ್ರದಾಯಿಕ ತಿಂಡಿಗಳಾದ ಕೊಟ್ಟೆಕಡುಬು, ಪತ್ರೊಡೆಯಿಂದ ಹಿಡಿದು ಇಸ್ಕಾನ್ನ ಬೇಕರಿ ತಿಂಡಿಗಳೂ ಇದ್ದವು. ರಾಗಿ ದೋಸೆ, ನವಣೆ ಬೇಳೆ ಬಾತ್ ಸವಿದವರ ಬಾಯಲ್ಲಿ ಅವುಗಳ ರುಚಿ ಇನ್ನೂ ಅಚ್ಚಳಿಯದೇ ಇದೆ.


ನನ್ನ ಕಂಗಳಲ್ಲಿ ಕಂಡಿದ್ದಿಷ್ಟು - ಇವಿಷ್ಟು ಕೇವಲ ನನ್ನ ಕಂಗಳಲ್ಲಿ ಕಂಡಿದ್ದು. ಇಂತಹ ಅದ್ಭುತ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕ ನಾನೇ ಧನ್ಯ.  ಕಾರ್ಯಕ್ರಮದ ವಿವರಗಳನ್ನು ವಿಶ್ವ ಸಂವಾದ ಕೇಂದ್ರದವರು ಸವಿವರ, ಸಚಿತ್ರವಾಗಿ ವರದಿ ಮಾಡಿದ್ದಾರೆ - ವರದಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ. ಆಯೋಜನೆ ಮಾಡಿದ ಎಲ್ಲಾ ಕಾರ್ಯಕರ್ತರಿಗೂ ಹೃದಯಪೂರ್ವಕ ಧನ್ಯವಾದಗಳು. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಆಶಿಸುತ್ತೇನೆ
ಇದು HSSFನ Twitter ಕೊಂಡಿ 

ಮೇಲಿನ ಬರವಣಿಗೆಯಲ್ಲಿ ತಪ್ಪಿದ್ದರೆ, ಇನ್ನೂ ಏನಾದರೂ ಸೇರಿಸಬಹುದೆನ್ನಿಸಿದರೆ ದಯವಿಟ್ಟು ಕಮೆಂಟ್ ಭಾಗದಲ್ಲಿ ತಿಳಿಸಿ

Friday, April 17, 2015

ಇನ್ನೆಷ್ಟು ಮೇಕೆದಾಟು ಹುಡುಕುವಿರಿ ಅಣ್ಣಾ ?

*ಇಸ್ರೇಲ್ ೮೦% ಉಪಯೋಗಿಸಿದ ನೀರನ್ನು ಪುನಃ ಉಪಯೋಗ ಮಾಡುತ್ತಾರೆ !!
*ಇಸ್ರೇಲ್ ನಲ್ಲಿ ನಂಬಿಕೊಳ್ಳು ವಂತಹ ನದಿ ಇಲ್ಲ 
*ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಇದರ ಬಹಳ ಹತ್ತಿರದ ಸ್ಪರ್ಧಿ ಮಾಡುತ್ತಿರುವುದು ಕೇsssವಲ ೧೦% - ಅಂದರೆ ೮ ಪಟ್ಟು ಹೆಚ್ಚು !!!!! 
*ಮರುಭೂಮಿಯಲ್ಲಿನ ರಾಷ್ಟ್ರ ನೀರನ್ನು ಹೊರ ದೇಶಗಳಿಗೆ ರಫ್ತು ಮಾಡುವ ಯೋಜನೆ ಹಾಕಿ ಕೊಂಡಿದೆ !!
*ಕರ್ನಾಟಕದ ೧/೯ ವಿಸ್ತೀರ್ಣ ಹೊಂದಿರುವ ಮರುಭೂಮಿಯ ರಾಷ್ಟ್ರ ತರಕಾರಿಗಳನ್ನು ರಫ್ತು ಮಾಡುತ್ತದೆ !!


ಇನ್ನೆಷ್ಟು ಮೇಕೆ ದಾಟು ಗಳನ್ನ ಹುಡುಕುವುದು ?!!
ಇನ್ನೆಷ್ಟು ಸಾವಿರ ಎಕರೆ ಅರಣ್ಯ ನಾಶ ಮಾಡುವುದು ??!!
ಇನ್ನೆಷ್ಟು ವನ್ಯ ಮೃಗಗಳು ,ಪಕ್ಷಿಗಳ ಜಾಗ ಕಿತ್ತುಕೊಳ್ಳುವುದು ?!!
ಬೆಂಗಳೂರನ್ನು ಮಾತ್ರ ಇನ್ನೆಷ್ಟು ಬೆಳೆಸುವುದು ?!!
ಎಲ್ಲರೂ ಬೆಂಗಳೂರಿಗೆ ಬರುವ೦ತೆ ಆಗಬೇಕೆ ?!!

Tuesday, March 17, 2015

ದಿನಾ ಸಾಯೋರಿಗೆ... ಎಂಬಂತೆ ಮಾತ್ರ ಆಗದಿರಲಿ ಪ್ಲೀss ಸ್


ದಿನಾ ಸಾಯೋರಿಗೆ... ಎಂಬಂತೆ ಮಾತ್ರ ಆಗದಿರಲಿ ಪ್ಲೀss ಸ್  

ಮಲ್ಲಿಕಾರ್ಜುನ ಬಂಡೆಯವರು ಇನ್ನೂ ಕೆಲವರಲ್ಲಿ ಅಚ್ಚಳಿಯದೆ ಮನಸ್ಸಿನಲ್ಲಿ ಹಾಗೆಯೇ ಇದ್ದರು, ಬಾಯಿ ಒಣಗುವವರೆಗೂ ಸರ್ಕಾರದ ವಿರುದ್ದ ಮಾತನಾಡಿ "ಬೆಂದ ಬೇಳೆಯನ್ನು"ತೆಗೆದುಕೊಂಡು ವಿರೋಧಪಕ್ಷದವರು ಬಂಡೆಯವರನ್ನು ಮರೆತರು. facebook ನಲ್ಲಿ ಹಾರಡಿದವನಿಗೆ ತನ್ನ ಮುಂದಿನ postಗೆ ಕೇಂದ್ರ ರಾಜಕೀಯ ಸಿಕ್ಕಿತು. ಕೊನೆಗೆ ಬಂಡೆ ಯವರ ಸಾವು , ಇತರ ಪ್ರಾಮಾಣಿಕ ಅಧಿಕಾರಿಗಳ ಸಾವಿನ೦ತೆಯೇ ಮೂಲೆ ಗುಂಪಾಯಿತು. 
                  ಇದರ ಫಲವಾಗಿ ಇಂದು ಇನ್ನೊಬ್ಬ ಪ್ರಾಮಾಣಿಕ , ದಕ್ಷ , ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಜೀವನವನ್ನೇ ತೇಯ್ದು ಈಗ ಜೀವವನ್ನೇ ತೆತ್ತಿದ್ದಾರೆ. ನಮ್ಮ ಜನರೇನು ಕಮ್ಮಿಯಿಲ್ಲ , ತಮ್ಮ ಆಕ್ರೋಶವನ್ನು ಕ್ಯಾಮೆರಾಗಳ ಮುಂದೆ ತೋರಿಸಿಕೊಳ್ಳುವಲ್ಲಿ ರವಿಯವರಿಗಿ೦ತ ಹೆಚ್ಚಿನ ಕಾರ್ಯ ತತ್ಪರತೆ ತೋರಿಸಿದ್ದಾರೆ. ಇಂತಹವರನ್ನು ನೋಡಿದ ಕೂಡಲೇ ಮನಸ್ಸಿಗೆ ಬರುವ ಮೊದಲ ಅಂಶ
  "ಇನ್ನು ಎಷ್ಟು ದಿನ ಹೀಗೆಯೇ ಇರುತ್ತದೆ ? ಕಡೆ ಪಕ್ಷ ಭಾನುವಾರದ ಭಾರತದ ವಿಶ್ವಕಪ್ ಪಂದ್ಯದವರೆಗೆ ??   "
ಹಿಂದಿನ ಘಟನೆಗಳನ್ನು ಅವಲೋಕಿಸಿದರೆ ಬೇಸರವಾಗುತ್ತದೆ , "ದಿನಾ ಸಾಯೋರಿಗೆ ಅಳುವವರ್ಯಾರು " ಎಂಬಂತಾಗದಿರಲಿ ಎನಿಸುತ್ತದೆ, ಇದು ಸಮಾಜಕ್ಕೆ ನನ್ನ ದೂಷಣೆ ಅಲ್ಲ. ವಾಸ್ತವ ಭಯ.  
"ಕಾನೂನಿನ ಹೋರಾಟ " ಒಂದು ಮಜಲಾದರೆ ಮನೆಯೊಳಗಿನಿಂದ ಬೇರಿನಿಂದಲೇ ಸರಿ ಮಾಡುವ ಇನ್ನೊಂದು ಮಜಲಿನ ಅವಶ್ಯಕತೆ , ಅನಿವಾರ್ಯತೆ ಇದೆ. ಸಮಾಜದಲ್ಲಿ ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕಿದೆ 

ನಾವು ಸಣ್ಣವರಿದ್ದಾಗ ದೂರ ದರ್ಶನದಲ್ಲಿ ನೋಡುತ್ತಿದ್ದ ಚಲನಚಿತ್ರಗಳು ಅಂದರೆ ಸುಮಾರು ೭೦,೮೦,೯೦ರ ದಶಕದವು - ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದ ಅಂಶ "ಪ್ರಾಮಾಣಿಕ ಅಧಿಕಾರಿಗಲ್ಲೆರೂ ಸಾಯುವವರೇ " ಆದರೆ ೪-೫ ವರ್ಷಗಳ ಹಿಂದೆ 
"ಪೃಥ್ವಿ" ಎಂಬ ಚಿತ್ರ ಒಬ್ಬ ಜಿಲ್ಲಾಧಿಕಾರಿಯನ್ನು ಸಮರ್ಥ ನಾಯಕನನ್ನಾಗಿ ಬಿಂಬಿಸಿದಾಗ ಆಗಿದ್ದ ರೋಮಾಂಚನ , ಸಂತಸಾ ಅಷ್ಟಿಷ್ಟಲ್ಲ. ಆದರೆ ಪುನಃ ಒಬ್ಬ ಜಿಲ್ಲಾಧಿಕಾರಿ  ಚಿತ್ರದ ದುರಂತ ಪಾತ್ರವಾಗಿ ನಿಜ ಜೀವನದಲ್ಲಿ ನೋಡಿ ಮನಸ್ಸಿಗೆ ಆಘಾತವಾಯಿತು. 
ಕೆಲವುದಿನಗಳಿಂದ ಅದೇ ರಾಜಕೀಯ ಕಚ್ಚಾಟಗಳ ಸುದ್ದಿಯನ್ನು ಓದಿ ಓದಿ ಸುದ್ದಿಗಲೆದೆಗೆ ಗಮನ ಕೊಡುವುದನ್ನೇ ಮರೆತಿದ್ದೆ. 

ಒಂದು ಜಿಲ್ಲೆಯ ಜಿಲ್ಲಾಧಿಕಾರಿಗೆ ಈ ಮಟ್ಟದ ಬೆಂಬಲ ದೊರಕಿರುವುದು ನನ್ನ ಜೀವಿತಾವಧಿಯಲ್ಲಿ ಇದೆ ಮೊದಲ ಬಾರಿಗೆ ನೋಡಿರುವುದು. 
ಇದನ್ನು ನೋಡಿದ ಮೇಲೆ ನನ್ನ ಭಾವನೆ
 " ಇಲ್ಲ ಡಿ.ಕೆ.ರವಿಯವರು ತೀರಿಕೊಂಡಿಲ್ಲ , ಒಂದು ಕಿಚ್ಚಾಗಿ ನಮ್ಮೆಲ್ಲರಲ್ಲಿ ನೆಲಿಸಿದ್ದಾರೆ, ಆ ಕಿಚ್ಚು ಇನ್ನು ಆರುವುದಿಲ್ಲ , ಭ್ರಷ್ಟರನ್ನು ಅನ್ಯಾಯ ಮಾಡುವವರನ್ನು ಬಿಡುವುದಿಲ್ಲ ,ಇನ್ನೂ ನೂರಾರು ಒಳ್ಳೆಯ ಅಧಿಕಾರಿಗಳಿಗೆ ಇವರು ಮಾದರಿಯಾಗಲಿದ್ದಾರೆ. ಭಾರತ ಪ್ರಕಾಶಿಸಲಿದೆ "




DK Ravi - IAS death is Murder not a Suicide facebook ಪುಟದ ಕೊಂಡಿ - ಹೆಚ್ಚಿನ ಮಾಹಿತಿಗಾಗಿ ಅದನ್ನು ಲೈಕ್ ಮಾಡಬಹುದು