ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತೆ...
ಮೊನ್ನೆ ರಾಷ್ಟ್ರ ಕವಿ ಶ್ರೀಯುತ ಶಿವರುದ್ರಪ್ಪನವರು ತೀರಿಕೊಂಡ ಕಾರಣ ಕರ್ನಾಟಕ ಸರ್ಕಾರವು ನೆನ್ನೆ (24-12-2013) ಸರ್ಕಾರಿ ರಜೆ ಘೋಷಿಸಿತು. ಪರಿಣಾಮ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಗದಿತ ಪರೀಕ್ಷೆಗಳು 4-1-2014ರವರೆಗೆ ಮುಂದೆ ಹೋಯಿತು.ಪರಿಣಾಮವಾಗಿ ಕೆಲವು ಭಾರತೀಯರಿಗೆ( ಕನ್ನಡಿಗರಿಗೆ ಮತ್ತು ಇತರರಿಗೆ) ಅಯ್ಯೋ ರಜೆ ಕಡಿಮೆ ಆಯಿತಲ್ಲ , ರೈಲಿಗೆ ಆರಕ್ಷಣೆ ಮಾಡಿಸಲು ವಿನಿಯೋಗಿಸಿದ್ದ ಹಣ ವ್ಯರ್ಥವಾಯಿತಲ್ಲಾ ಎಂದು ಬೇಸರವಾಯಿತು.ನಾನು ಹೇಳುತ್ತಿರುವುದು ಅವರು
ಅದರಲ್ಲಿ ಕೆಲವರು FACEBOOKನಲ್ಲಿ ಕೆಟ್ಟದಾಗಿ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೇ ಆಕಾಶ ಕೆಳಗೆ ಬಿದ್ದವರಂತೆ ಆಡುವುದೇ ?
'ನಮ್ಮ ಸಾಂಸ್ಕೃತಿಕ' ಪದಗಳನ್ನು ಉಪಯೋಗಿಸಿ ಬೈದಿದ್ದೇನು ,ಅವನ್ನನ್ನು ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತ ರೋಷ ಪೂರಿತ Comment ಮಾಡಿದ್ದೇನು ... ಅಬ್ಬಬ್ಬಬ್ಬಾ.....
ನಿಮ್ಮಲ್ಲೇ ಎಷ್ಟು ಜನರಿಗೆ ಶಿವರುದ್ರಪ್ಪನವರ ಕೃತಿಗಳ ಬಗ್ಗೆ 5 ಪೈಸೆಯಷ್ಟು ಜ್ಞಾನ ಇದೆ ?
ಎಷ್ಟು ಜನ ಶಿವರುದ್ರಪ್ಪನವರ ಜೀವನದ ಬಗ್ಗೆ ಓದಿದ್ದೀರಾ ? ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಿದ್ದೀರಾ ?ಇವೆಲ್ಲವುಗಳಲ್ಲಿ ಒಂದುನ್ನು ಮಾಡಿ , ಕನ್ನಡಕ್ಕೆ ನಿಮ್ಮ ಸೇವೆ ಹೆಚ್ಚುತ್ತದೆ . ಅದು ಬಿಟ್ಟು ಥೂ ನಾಚಿಕೆಯಾಗಬೇಕು ನಿಮ್ಮ ವರ್ತನೆಗೆ.
ಬಹುಶಹ 1995-96ರ ನಂತರ ಕರ್ನಾಟಕದಲ್ಲಿ ಹುಟ್ಟು ಬೆಳೆದ ಅಥವಾ ಸಾಹಿತ್ಯಾಸಕ್ತಿ ಇರದ ಕನ್ನಡಿಗರಿಗೆ ಶಿವರುದ್ರಪ್ಪನವರ ಹೆಸರು ಹೊಸದಿರುವಾಗ , ಎಲ್ಲೋ ಉತ್ತರ ಭಾರತದಲ್ಲಿ ಓದಿ ಬೆಂಗಳೂರಿಗೆ ಬಂದಿರುವವರಿಗೆ ಅವರ ಹೆಸರು, ಅವರ ಘನತೆ ಹೇಗೆ ಗೊತ್ತಾಗಬೇಕು ಹೇಳಿ ?
ನಾನು ಹೇಳುತ್ತಿರುವುದು, ಅವನದು ಏನು ತಪ್ಪಿಲ್ಲ ಎಂದಲ್ಲ. ಅವನು ತಪ್ಪು ಮಾಡಿದ್ದಾನೆ, ಕ್ಷಮೆ ಕೇಳಿದ್ದಾನೆ .. ಬಿಟ್ಟು ಬಿಡಿ.. ಅದೇ ನಮಗೆ ಶೋಭೆ.
ಗುಬ್ಬಿಯ ಮೇಲೆ ಬ್ರಂಹಾಸ್ತ್ರವೇ ?
ಎರಡು ದಿನಗಳ ಹಿಂದೆ ನಾವೇ ನೋಡಿದಂತೆ ಕನ್ನಡ ಸಾಹತ್ಯ ಪರಿಷತ್ತಿನವರು ಸರ್ಕಾರಿ ಹಣವಿಲ್ಲದೆ ಒದ್ದಾಡುತ್ತಿದೆ . ಸಚಿವೆ ಉಮಾಶ್ರೀಯವರಿಗೆ ಕೇಳಿದರೆ ಸಂಭಂದವೇ ಇಲ್ಲವೆಂಬಂತೆ ಮಾತನಾಡಿದರು. ನಿಮಗೆ ನಿಜವಾಗಲೂ ಕನ್ನಡದ ಬಗ್ಗೆ ಆಸ್ಥೆ ಇದ್ದರೆ ಇದರ ಬಗ್ಗೆ ಮಾತಾಡಿ. ಅದು ಬಿಟ್ಟು ಒಬ್ಬ ಸಾಮಾನ್ಯ ಮನುಷ್ಯನ ವಿರುದ್ದ ಎಲ್ಲರೂ ಸೇರಿ ಕಿರಚಾಡುವುದೇ ? ನಾಚಿಕೆ ಪಡಿ ನಿಮ್ಮನ್ನು ನೋಡಿಕೊಂಡು .
(ಆಯುಷ್ ಮೇಲೆ change.org ನಲ್ಲಿನ ದಾವೆ)
ಕೊನೆಯದಾಗಿ ನಾನು ಹೇಳುವುದು ಇಷ್ಟೇ , ದಯವಿಟ್ಟು ನಿಮ್ಮ ಇದೆ ರೋಷವನ್ನು,ಕಿಚ್ಚನ್ನು , ಪೌರುಶತ್ವವನ್ನು ನಮ್ಮ ಸೈನಿಕರ ತಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ಪಾಕಿಸ್ತಾನ ಹಾಗೂ ಚೀನಾ ವಿರುದ್ದವೂ ತೋರಿಸಿ. ಆಗ ನಿಮ್ಮ ಆ ಗುಣಗಳು ನಿಮ್ಮಲ್ಲಿರುವುದಕ್ಕೆ ಸಾರ್ಥಕತೆ ಸಿಗುತ್ತದೆ.

Namaskara Vasista avare,
ReplyDeleteNammalli este samashye galu irabahudu. ondu rajya andre internal problems saviraru iratte.. Namma olagade iro problems solve ago tanaka, horagade inda banda naayigalu bogalali antha bitre , idankinta hecchige bogalta irtare..
ಹಾಗಂತ ಬೊಗಳುವವರೆಡೆಗೆ ಗಮನಕೊಡುವಂತಹ ಪ್ರವೃತ್ತಿ ಬೆಳೆಯುತ್ತಿದೆ ಎಂದು ನಿಮಗನ್ನಿಸುತ್ತಿಲ್ಲವೇ ?
Deleteಕೇವಲ facebookನಲ್ಲಿ ಉತ್ತರ ಕೊಡುವಂತಹುದೋ ಅಥವಾ block ಮಾಡುವಂತಹುದೋ ಆಗಿದ್ದಾರೆ ಪರವಾಗಿಲ್ಲ ... ಇವರ ವರ್ತನೆ ಇನ್ನೂ ಹದ ಮೀರಿತ್ತು