ಹೀಗೆ ಯಾವುದಕ್ಕೋ ಉಚಿತವಾಗಿ ಸಿಕ್ಕಿದ್ದ ,ಮನೆಯಲ್ಲಿ ಉಪಯೋಗಿಸದೆ ಬಿದ್ದಿದ್ದ ಹಳೇ ಕೈಗಡಿಯಾರವೊಂದನ್ನು ಸರಿಮಾಡಿಸಲು ನೆನ್ನೆ ಸಂಜೆ ಒಂದು ಅಂಗಡಿಗೆ ಹೋಗಿದ್ದೆ. ಅದನ್ನು ನಾನು ಉಪಯೋಗಿಸದೆ ಇದ್ದುದಕ್ಕೆ ಬಹು ಮುಖ್ಯ ಕಾರಣ , ಅದರ 'dial' ಮೇಲೆ ಪರದೇಶಿ ಬಾವುಟವೊಂದರ ಚಿತ್ರವಿದ್ದುದು. ಅದನ್ನು ಹಾಕಿಕೊಂಡಾಗಲೆಲ್ಲ ಮೈ ಉರಿಯುತ್ತಿತ್ತು. ಅಂಗಡಿಗೆ ಹೋದವ ಮೊದಲು ಹೊಸ 'ವಿದ್ಯುತ್ ಕೋಶ'(Electric cell) ವನ್ನು ಹಾಕಲು ಹೇಳಿದೆ.
ನಂತರ "ಒಂದು ಚೂರು ಆ 'dial' ಇರುವ ಧ್ವಜದ ಮೇಲೆ ಗೀಚಬೇಕಿತ್ತು ಅದರಮೇಲಿರುವ ಗಾಜು ತೆಗೆದುಕೊಡುವಿರಾ" ಎಂದುಕೇಳಿದೆ .ಮೊದಲಿಗೆ ಅವರಿಗೆ "ಏನು ಗೀಚಬೇಕೆ ? ? ಏಕಪ್ಪ " ಎಂದು ಕೇಳಿದರು. ವಿವರಿಸಿ ಹೇಳಿದೆ. "... ಆ ಧ್ವಜ ಇದ್ದರೆ ಹಾಕಿಕೊಳ್ಳಲು ಮನಸ್ಸೇ ಬರುವುದಿಲ್ಲ" ಎಂದೆ ... ಅವರ ಮುಂದಿನ ಪ್ರಶ್ನೆ ಕೇಳಿ ದಂಗಾಯಿತು.
ನೀನು 'RSS'ನವನೆನಪ್ಪಾ ?
![]() |
| ((ಸಾಂದರ್ಭಿಕ ಚಿತ್ರ )) | ಇದೆ ರೀತಿಯ ಕೈ ಗಡಿಯಾರ |
ನಾನು ಉತ್ತರಿಸುತ್ತಾ "ಹೌದು, ನಿಮಗೇಕೆ ಹಾಗನಿಸಿತು ?" ಎಂದೇ
ಅವರು ಹೇಳಿದರು" ಇಷ್ಟೊಂದು ರಾಷ್ಟ್ರಾಭಿಮಾನ ಇನ್ನ್ಯಾರಿಗೆ ತಾನೇ ಇರುತ್ತದೆ"ಎಂದರು.
ನಾನು ಮರು ಪ್ರಶ್ನಿಸಿದೆ," ನಿಮ್ಮ ಪ್ರಕಾರ 120 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಕೇವಲ 1 ಕೋಟಿ ಇರುವ ಸ್ವಯಂಸೇವಕರಿಗೆ ಮಾತ್ರ ರಾಷ್ಟ್ರಾಭಿಮಾನ ಇರುವುದೇ ?" ಎಂದು .ಅವರ ಉತ್ತರ ಭಾರೀ ಸಂತಸ ನೀಡಿತು.
"ನಾನೆಲ್ಲಿ ಹಾಗೆ ಹೇಳಿದೆ, ಇನ್ನುಳಿದವರಲ್ಲಿ ಕೆಲವರಿಗೆ , ಆಗಸ್ಟ್ 15, ಜನವರಿ 26, ಮಾರ್ಚ್ 23 ಮತ್ತು ಭಾರತ ವಿಶ್ವಕಪ್ ಗೆದ್ದಾಗ ಮಾತ್ರ ರಾಷ್ಟ್ರಾಭಿಮಾನ ಉಕ್ಕಿ ಬರುತ್ತದೆ. ಆದರೆ ಸಂಘದವರಿಗೆ ಮತ್ತು ಸೈನಿಕರಿಗೆ ಮಾತ್ರ ಯಾವಾಗಲೂ ಜಾಗೃತಗೊಂಡಿರುತ್ತದೆ" ಎಂದರು.
ಒಮ್ಮೆ ನನ್ನಗೆ ಅನುಮಾನ ಬಂದುಬಿಟ್ಟಿತು , "ನಾವು ಇಷ್ಟೊಂದು ಪ್ರಶಂಸೆಗೆ ಅರ್ಹರೇ?!" ಎಂದು.

No comments:
Post a Comment