ಹೀಗೆ ಮೊನ್ನೆ ಬೆಂಗಳೂರಿನ ವಿದ್ಯಾಪೀಠದ ಬಳಿ ಇರುವ S.L.V ಉಪಹಾರ ಕೇಂದ್ರಕ್ಕೆ ಹೋಗಿದ್ದೆ. ತಿಂಡಿ ತಿನ್ನುತ್ತಿದ್ದಾಗ ಎದುರು ಇಬ್ಬರು ಸಣ್ಣ ಮಕ್ಕಳು ಮಾತನಾಡುತ್ತಿದ ವಾಕ್ಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
ಆ ಉಪಹಾರ ಕೇಂದ್ರದಲ್ಲಿ 'ಮಹಾಪುರುಷರ' ಭಾವಚಿತ್ರಗಳನ್ನು ಹಾಕಿದ್ದಾರೆ. ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರು,ಸಮಾಜ ಸುಧಾರಕರು ,ನಟರು ಎಲ್ಲರದ್ದೂ ಸೇರಿ 10-12 ಇದೆ.
ಅವುಗಳಲ್ಲಿದ್ದ ಭಾವಚಿತ್ರಗಳನ್ನು ನೋಡುತ್ತಾ ಒಬ್ಬ ಹುಡುಗ ಇನ್ನೊಬ್ಬನಿಗೆ "ಏ ಅಲ್ಲಿ ನೋಡು ರಾಜ್ಕುಮಾರ್, ಅಲ್ಲಿ ವಿಷ್ಣುವರ್ಧನ್.... ಅಲ್ಲಿ ದರ್ಶನ್ " ಅಂದ.
ನನಿಗೆ ಅಚ್ಚರಿ ಆಯಿತು. ಏಕೆಂದರೆ ಅಲ್ಲಿ ದರ್ಶನ್ರ ಚಿತ್ರ ಇರಲೇ ಇಲ್ಲ.
ಆ ನಂತರ ತಿಳಿಯಿತು , ಸಂಗೊಳ್ಳಿ ರಾಯಣ್ಣನ ಚಿತ್ರ ನೋಡಿ ಆ ಹುಡುಗ ಹಾಗೆ ಹೇಳಿದ್ದೆಂದು !!
![]() |
| S.L.V ಉಪಹಾರ ಕೇಂದ್ರದಲ್ಲಿ ಇರುವ ಭಾವಚಿತ್ರಗಳು |
ದರ್ಶನ, ಸಂಗೊಳ್ಳಿರಾಯಣ್ಣ ಚಿತ್ರದಲ್ಲಿ
ಅಲ್ಲಿದ್ದ ಸಂಗೊಳ್ಳಿರಾಯಣ್ಣನ ಚಿತ್ರಕ್ಕೂ ದರ್ಶನ್‌ರ ಮುಖಕ್ಕೂ ಯಾವುದೇ ಹೋಲಿಕೆ ಇರದಿದ್ದರೂ , ಆ ಮಕ್ಕಳಿಗೆ ಇನ್ನೂ ಮುಂದೆ 'ಸಂಗೊಳ್ಳಿ ರಾಯಣ್ಣ' ಎಂದರೆ ದರ್ಶನ್, 'ದರ್ಶನ' ಎಂದರೆ ಸಂಗೊಳ್ಳಿರಾಯಣ್ಣನ ಹೆಸರು ನೆನಪಾಗಬಹುದೇನೋ !!
ಈಗಿನ ಪಠ್ಯದಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸುವ ಎಳ್ಳಷ್ಟೂ ಪ್ರಯತ್ನ ಇಲ್ಲದಿರುವಾಗ ಇಂತಹ ಸಣ್ಣ ಪ್ರಯತ್ನಗಳು ಚಲನ ಚಿತ್ರಗಳ ಮೂಲಕ ಆಗುತ್ತಿರುವುದು ಶ್ಲಾಘನೀಯ.
ನಮ್ಮ ಪೀಳಿಗೆಯವರಿಗೂ ಸಹ ಕೃಷ್ಣದೇವರಾಯ ಸೇರಿದಂತೆ ಇನ್ನೂ ಹಲವು ರಾಜರ ಹೆಸರು ಕೇಳಿದೊಡನೆ ಮನಸ್ಸಿನಲ್ಲಿ ಮೊದಲು ಡಾ||ರಾಜ್ಕುಮಾರರ ಮುಖವೇ ಮೂಡುವುದು
ಇದೇ ಸಂದರ್ಭದಲ್ಲಿ ನನ್ನ ಗೆಳೆಯ ಜಯಂತರ ಸುಂದರ ನಿಮಗಾಗಿ
"While my history text books taught me about we Indians being ruled by foreign Mughals for 300 years in 5 chapters, Dr.Raj's movies taught me about the glorious vijayanagar empire that ruled entire South India for 400 years in 3 hrs,"

No comments:
Post a Comment