ಮೊನ್ನೆ ಬೆಂಗಳೂರಿನಲ್ಲಿ ಬಸ್ ಹತ್ತಿದೆ. ಬಸ್ನಲ್ಲಿ ಒಂದು 50 ಜನ ಇದ್ದರು. ಮಹಿಳಾ ನಿರ್ವಾಹಕರು ಬಂದರು. Ticket ವಿತರಿಸುತ್ತಿರುವಾಗ ಒಬ್ಬರಿಗೆ 12 ರೂ ಕೊಡಲು ಹೇಳಿದರು. ಆದರೆ ಆತ 100 ರೂ ಕೊಟ್ಟು "ಚಿಲ್ಲರೆ ಇಲ್ಲ "ಎಂದು ಹೇಳಿದ. ಈಕೆ 90 ರೂ. ವಾಪಾಸ್ ಕೊಟ್ಟು, ಕೊಡದೆ ಹಾಗೆಯೇ ಹೊರಟಳು. ಈತನು ಏನನ್ನು ಹೇಳಲಿಲ್ಲ.
ಆದರೆ ಈತನ ಪಕ್ಕದಲ್ಲಿ ಕೂತಿದ್ದ ಹಿರಿಯರೊಬ್ಬರು, "ಏನ್ ತಾಯಿ ನೀವೂ ಹೀಗೇನಾ ? ಗಂಡಸರಿಗೂ ಹೆಂಗಸರಿಗೂ ವ್ಯತ್ಯಾಸವೇ ಇಲ್ಲವೇ ? ಭ್ರಷ್ಟಾಚಾರದಲ್ಲೂ ಸಮಾನತೆಯೇ ?!! " ಎನ್ನುವಷ್ಟೊತ್ತಿಗೆ ಪಕ್ಕದಲ್ಲೇ ಕುಳಿತಿದ್ದ ಇನೊಬ್ಬ ಆಸಾಮಿಯೊಬ್ಬರು" ಅಯ್ಯೋ ಇರಲಿ ಬಿಡಿ ಸ್ವಾಮಿ.. ರಾಜಕಾರಣಿಗಳು ಸಾವಿರಾರು ಕೋಟಿ ಹೊಡೆಯುತ್ತಾರೆ,ಇವರು ದಿನಕ್ಕೆ 200-300 ಮಾಡೋದರಲ್ಲಿ ತಪ್ಪೇನಿದೆ ? "ಎಂದರು.
ಹಿರಿಯರು ಇನ್ನೂ ಕುಪಿತರಾದಂತಿತ್ತು."ಹೋಗ್ಲಿ ಬಿಡಿ ಸ್ವಾಮಿ ,ಅವರು ಹೊಡೀತಾರೆ ಅಂತ ಇವರು ಹೊಡೀಲಿ,ಇವರು ಹೊಡೀತಾರೆ ಅಂತ ನಮ್ಮ ಜನರು ಕೊಡುತ್ತಿರಲಿ,ಈ Chainಗೆ FullStop ಯಾವಾಗಲೋ ಕಾಣೆ ?"ಎಂದರು.
ಅಲ್ಲಿದ್ದವರಲ್ಲಿ ಯಾರಿಗೂ ಉತ್ತರಿಸುವ ನೈತಿಕತೆ ಇರಲಿಲ್ಲವೇನೋ !! ಯಾಕೆಂದರೆ
ಎಲ್ಲರೂ ಒಮ್ಮೆಯಾದರೂ ಕೊಟ್ಟವರಲ್ಲವೇ.?
ಅಂದಹಾಗೆ ನಿಮಗೇನನ್ನಿಸುತ್ತದೆ,FullStop ಯಾವಾಗ ?

No comments:
Post a Comment