Tuesday, March 17, 2015

ದಿನಾ ಸಾಯೋರಿಗೆ... ಎಂಬಂತೆ ಮಾತ್ರ ಆಗದಿರಲಿ ಪ್ಲೀss ಸ್


ದಿನಾ ಸಾಯೋರಿಗೆ... ಎಂಬಂತೆ ಮಾತ್ರ ಆಗದಿರಲಿ ಪ್ಲೀss ಸ್  

ಮಲ್ಲಿಕಾರ್ಜುನ ಬಂಡೆಯವರು ಇನ್ನೂ ಕೆಲವರಲ್ಲಿ ಅಚ್ಚಳಿಯದೆ ಮನಸ್ಸಿನಲ್ಲಿ ಹಾಗೆಯೇ ಇದ್ದರು, ಬಾಯಿ ಒಣಗುವವರೆಗೂ ಸರ್ಕಾರದ ವಿರುದ್ದ ಮಾತನಾಡಿ "ಬೆಂದ ಬೇಳೆಯನ್ನು"ತೆಗೆದುಕೊಂಡು ವಿರೋಧಪಕ್ಷದವರು ಬಂಡೆಯವರನ್ನು ಮರೆತರು. facebook ನಲ್ಲಿ ಹಾರಡಿದವನಿಗೆ ತನ್ನ ಮುಂದಿನ postಗೆ ಕೇಂದ್ರ ರಾಜಕೀಯ ಸಿಕ್ಕಿತು. ಕೊನೆಗೆ ಬಂಡೆ ಯವರ ಸಾವು , ಇತರ ಪ್ರಾಮಾಣಿಕ ಅಧಿಕಾರಿಗಳ ಸಾವಿನ೦ತೆಯೇ ಮೂಲೆ ಗುಂಪಾಯಿತು. 
                  ಇದರ ಫಲವಾಗಿ ಇಂದು ಇನ್ನೊಬ್ಬ ಪ್ರಾಮಾಣಿಕ , ದಕ್ಷ , ಜೀವಿತಾವಧಿಯಲ್ಲಿ ಸಮಾಜಕ್ಕಾಗಿ ಜೀವನವನ್ನೇ ತೇಯ್ದು ಈಗ ಜೀವವನ್ನೇ ತೆತ್ತಿದ್ದಾರೆ. ನಮ್ಮ ಜನರೇನು ಕಮ್ಮಿಯಿಲ್ಲ , ತಮ್ಮ ಆಕ್ರೋಶವನ್ನು ಕ್ಯಾಮೆರಾಗಳ ಮುಂದೆ ತೋರಿಸಿಕೊಳ್ಳುವಲ್ಲಿ ರವಿಯವರಿಗಿ೦ತ ಹೆಚ್ಚಿನ ಕಾರ್ಯ ತತ್ಪರತೆ ತೋರಿಸಿದ್ದಾರೆ. ಇಂತಹವರನ್ನು ನೋಡಿದ ಕೂಡಲೇ ಮನಸ್ಸಿಗೆ ಬರುವ ಮೊದಲ ಅಂಶ
  "ಇನ್ನು ಎಷ್ಟು ದಿನ ಹೀಗೆಯೇ ಇರುತ್ತದೆ ? ಕಡೆ ಪಕ್ಷ ಭಾನುವಾರದ ಭಾರತದ ವಿಶ್ವಕಪ್ ಪಂದ್ಯದವರೆಗೆ ??   "
ಹಿಂದಿನ ಘಟನೆಗಳನ್ನು ಅವಲೋಕಿಸಿದರೆ ಬೇಸರವಾಗುತ್ತದೆ , "ದಿನಾ ಸಾಯೋರಿಗೆ ಅಳುವವರ್ಯಾರು " ಎಂಬಂತಾಗದಿರಲಿ ಎನಿಸುತ್ತದೆ, ಇದು ಸಮಾಜಕ್ಕೆ ನನ್ನ ದೂಷಣೆ ಅಲ್ಲ. ವಾಸ್ತವ ಭಯ.  
"ಕಾನೂನಿನ ಹೋರಾಟ " ಒಂದು ಮಜಲಾದರೆ ಮನೆಯೊಳಗಿನಿಂದ ಬೇರಿನಿಂದಲೇ ಸರಿ ಮಾಡುವ ಇನ್ನೊಂದು ಮಜಲಿನ ಅವಶ್ಯಕತೆ , ಅನಿವಾರ್ಯತೆ ಇದೆ. ಸಮಾಜದಲ್ಲಿ ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕಿದೆ 

ನಾವು ಸಣ್ಣವರಿದ್ದಾಗ ದೂರ ದರ್ಶನದಲ್ಲಿ ನೋಡುತ್ತಿದ್ದ ಚಲನಚಿತ್ರಗಳು ಅಂದರೆ ಸುಮಾರು ೭೦,೮೦,೯೦ರ ದಶಕದವು - ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದ ಅಂಶ "ಪ್ರಾಮಾಣಿಕ ಅಧಿಕಾರಿಗಲ್ಲೆರೂ ಸಾಯುವವರೇ " ಆದರೆ ೪-೫ ವರ್ಷಗಳ ಹಿಂದೆ 
"ಪೃಥ್ವಿ" ಎಂಬ ಚಿತ್ರ ಒಬ್ಬ ಜಿಲ್ಲಾಧಿಕಾರಿಯನ್ನು ಸಮರ್ಥ ನಾಯಕನನ್ನಾಗಿ ಬಿಂಬಿಸಿದಾಗ ಆಗಿದ್ದ ರೋಮಾಂಚನ , ಸಂತಸಾ ಅಷ್ಟಿಷ್ಟಲ್ಲ. ಆದರೆ ಪುನಃ ಒಬ್ಬ ಜಿಲ್ಲಾಧಿಕಾರಿ  ಚಿತ್ರದ ದುರಂತ ಪಾತ್ರವಾಗಿ ನಿಜ ಜೀವನದಲ್ಲಿ ನೋಡಿ ಮನಸ್ಸಿಗೆ ಆಘಾತವಾಯಿತು. 
ಕೆಲವುದಿನಗಳಿಂದ ಅದೇ ರಾಜಕೀಯ ಕಚ್ಚಾಟಗಳ ಸುದ್ದಿಯನ್ನು ಓದಿ ಓದಿ ಸುದ್ದಿಗಲೆದೆಗೆ ಗಮನ ಕೊಡುವುದನ್ನೇ ಮರೆತಿದ್ದೆ. 

ಒಂದು ಜಿಲ್ಲೆಯ ಜಿಲ್ಲಾಧಿಕಾರಿಗೆ ಈ ಮಟ್ಟದ ಬೆಂಬಲ ದೊರಕಿರುವುದು ನನ್ನ ಜೀವಿತಾವಧಿಯಲ್ಲಿ ಇದೆ ಮೊದಲ ಬಾರಿಗೆ ನೋಡಿರುವುದು. 
ಇದನ್ನು ನೋಡಿದ ಮೇಲೆ ನನ್ನ ಭಾವನೆ
 " ಇಲ್ಲ ಡಿ.ಕೆ.ರವಿಯವರು ತೀರಿಕೊಂಡಿಲ್ಲ , ಒಂದು ಕಿಚ್ಚಾಗಿ ನಮ್ಮೆಲ್ಲರಲ್ಲಿ ನೆಲಿಸಿದ್ದಾರೆ, ಆ ಕಿಚ್ಚು ಇನ್ನು ಆರುವುದಿಲ್ಲ , ಭ್ರಷ್ಟರನ್ನು ಅನ್ಯಾಯ ಮಾಡುವವರನ್ನು ಬಿಡುವುದಿಲ್ಲ ,ಇನ್ನೂ ನೂರಾರು ಒಳ್ಳೆಯ ಅಧಿಕಾರಿಗಳಿಗೆ ಇವರು ಮಾದರಿಯಾಗಲಿದ್ದಾರೆ. ಭಾರತ ಪ್ರಕಾಶಿಸಲಿದೆ "




DK Ravi - IAS death is Murder not a Suicide facebook ಪುಟದ ಕೊಂಡಿ - ಹೆಚ್ಚಿನ ಮಾಹಿತಿಗಾಗಿ ಅದನ್ನು ಲೈಕ್ ಮಾಡಬಹುದು 

Saturday, April 19, 2014

ನೀವು ಹೀಗೇನಾ ತಾಯಿ ?;ಭ್ರಷ್ಟಾಚಾರದಲ್ಲೂ ಸಮಾನತೆಯೇ ?

ಮೊನ್ನೆ ಬೆಂಗಳೂರಿನಲ್ಲಿ ಬಸ್ ಹತ್ತಿದೆ. ಬಸ್ನಲ್ಲಿ ಒಂದು 50 ಜನ ಇದ್ದರು. ಮಹಿಳಾ ನಿರ್ವಾಹಕರು ಬಂದರು. Ticket ವಿತರಿಸುತ್ತಿರುವಾಗ ಒಬ್ಬರಿಗೆ 12 ರೂ ಕೊಡಲು ಹೇಳಿದರು. ಆದರೆ ಆತ 100 ರೂ ಕೊಟ್ಟು "ಚಿಲ್ಲರೆ ಇಲ್ಲ "ಎಂದು ಹೇಳಿದ. ಈಕೆ 90 ರೂ. ವಾಪಾಸ್ ಕೊಟ್ಟು, ಕೊಡದೆ ಹಾಗೆಯೇ ಹೊರಟಳು. ಈತನು ಏನನ್ನು ಹೇಳಲಿಲ್ಲ. 
ದರೆ ಈತನ ಪಕ್ಕದಲ್ಲಿ ಕೂತಿದ್ದ ಹಿರಿಯರೊಬ್ಬರು, "ಏನ್ ತಾಯಿ ನೀವೂ ಹೀಗೇನಾ ? ಗಂಡಸರಿಗೂ ಹೆಂಗಸರಿಗೂ ವ್ಯತ್ಯಾಸವೇ ಇಲ್ಲವೇ ? ಭ್ರಷ್ಟಾಚಾರದಲ್ಲೂ ಸಮಾನತೆಯೇ ?!! " ಎನ್ನುವಷ್ಟೊತ್ತಿಗೆ ಪಕ್ಕದಲ್ಲೇ ಕುಳಿತಿದ್ದ ಇನೊಬ್ಬ ಆಸಾಮಿಯೊಬ್ಬರು" ಅಯ್ಯೋ ಇರಲಿ ಬಿಡಿ ಸ್ವಾಮಿ.. ರಾಜಕಾರಣಿಗಳು ಸಾವಿರಾರು ಕೋಟಿ ಹೊಡೆಯುತ್ತಾರೆ,ಇವರು ದಿನಕ್ಕೆ 200-300 ಮಾಡೋದರಲ್ಲಿ ತಪ್ಪೇನಿದೆ ? "ಎಂದರು.
ಹಿರಿಯರು ಇನ್ನೂ ಕುಪಿತರಾದಂತಿತ್ತು."ಹೋಗ್ಲಿ ಬಿಡಿ ಸ್ವಾಮಿ ,ಅವರು ಹೊಡೀತಾರೆ ಅಂತ ಇವರು ಹೊಡೀಲಿ,ಇವರು ಹೊಡೀತಾರೆ ಅಂತ ನಮ್ಮ ಜನರು ಕೊಡುತ್ತಿರಲಿ,ಈ Chainಗೆ FullStop ಯಾವಾಗಲೋ ಕಾಣೆ ?"ಎಂದರು. 
ಅಲ್ಲಿದ್ದವರಲ್ಲಿ ಯಾರಿಗೂ ಉತ್ತರಿಸುವ ನೈತಿಕತೆ ಇರಲಿಲ್ಲವೇನೋ !! ಯಾಕೆಂದರೆ
  ಎಲ್ಲರೂ ಒಮ್ಮೆಯಾದರೂ ಕೊಟ್ಟವರಲ್ಲವೇ.?
ಅಂದಹಾಗೆ ನಿಮಗೇನನ್ನಿಸುತ್ತದೆ,FullStop ಯಾವಾಗ ?


Sunday, April 6, 2014

ಮರೆಯಾದ ಇತಿಹಾಸ ಪ್ರಜ್ಞೆ;ಚಲನಚಿತ್ರಗಳಿಂದ ಒಂದು ಪ್ರಾಮಾಣಿಕ ಪ್ರಯತ್ನ

ಹೀಗೆ ಮೊನ್ನೆ ಬೆಂಗಳೂರಿನ ವಿದ್ಯಾಪೀಠದ ಬಳಿ ಇರುವ  S.L.V ಉಪಹಾರ ಕೇಂದ್ರಕ್ಕೆ ಹೋಗಿದ್ದೆ. ತಿಂಡಿ ತಿನ್ನುತ್ತಿದ್ದಾಗ ಎದುರು ಇಬ್ಬರು ಸಣ್ಣ ಮಕ್ಕಳು ಮಾತನಾಡುತ್ತಿದ ವಾಕ್ಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
ಆ ಉಪಹಾರ ಕೇಂದ್ರದಲ್ಲಿ 'ಮಹಾಪುರುಷರ' ಭಾವಚಿತ್ರಗಳನ್ನು ಹಾಕಿದ್ದಾರೆ. ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರು,ಸಮಾಜ ಸುಧಾರಕರು ,ನಟರು ಎಲ್ಲರದ್ದೂ ಸೇರಿ 10-12 ಇದೆ.
ಅವುಗಳಲ್ಲಿದ್ದ ಭಾವಚಿತ್ರಗಳನ್ನು ನೋಡುತ್ತಾ ಒಬ್ಬ ಹುಡುಗ ಇನ್ನೊಬ್ಬನಿಗೆ "ಏ ಅಲ್ಲಿ ನೋಡು ರಾಜ್ಕುಮಾರ್, ಅಲ್ಲಿ ವಿಷ್ಣುವರ್ಧನ್.... ಅಲ್ಲಿ ದರ್ಶನ್ " ಅಂದ.
ನನಿಗೆ ಅಚ್ಚರಿ ಆಯಿತು. ಏಕೆಂದರೆ ಅಲ್ಲಿ ದರ್ಶನ್ರ ಚಿತ್ರ ಇರಲೇ ಇಲ್ಲ.
ಆ ನಂತರ ತಿಳಿಯಿತು , ಸಂಗೊಳ್ಳಿ ರಾಯಣ್ಣನ ಚಿತ್ರ ನೋಡಿ ಆ ಹುಡುಗ ಹಾಗೆ ಹೇಳಿದ್ದೆಂದು !!
S.L.V ಉಪಹಾರ ಕೇಂದ್ರದಲ್ಲಿ ಇರುವ ಭಾವಚಿತ್ರಗಳು

ದರ್ಶನ, ಸಂಗೊಳ್ಳಿರಾಯಣ್ಣ ಚಿತ್ರದಲ್ಲಿ
ಲ್ಲಿದ್ದ ಸಂಗೊಳ್ಳಿರಾಯಣ್ಣನ ಚಿತ್ರಕ್ಕೂ ದರ್ಶನ್‌ರ ಮುಖಕ್ಕೂ ಯಾವುದೇ ಹೋಲಿಕೆ ಇರದಿದ್ದರೂ , ಆ ಮಕ್ಕಳಿಗೆ ಇನ್ನೂ ಮುಂದೆ 'ಸಂಗೊಳ್ಳಿ ರಾಯಣ್ಣ' ಎಂದರೆ ದರ್ಶನ್, 'ದರ್ಶನ' ಎಂದರೆ ಸಂಗೊಳ್ಳಿರಾಯಣ್ಣನ ಹೆಸರು ನೆನಪಾಗಬಹುದೇನೋ !!

ಈಗಿನ ಪಠ್ಯದಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸುವ ಎಳ್ಳಷ್ಟೂ ಪ್ರಯತ್ನ ಇಲ್ಲದಿರುವಾಗ ಇಂತಹ ಸಣ್ಣ ಪ್ರಯತ್ನಗಳು ಚಲನ ಚಿತ್ರಗಳ ಮೂಲಕ ಆಗುತ್ತಿರುವುದು ಶ್ಲಾಘನೀಯ.
ನಮ್ಮ ಪೀಳಿಗೆಯವರಿಗೂ ಸಹ ಕೃಷ್ಣದೇವರಾಯ ಸೇರಿದಂತೆ ಇನ್ನೂ ಹಲವು ರಾಜರ ಹೆಸರು ಕೇಳಿದೊಡನೆ ಮನಸ್ಸಿನಲ್ಲಿ ಮೊದಲು ಡಾ||ರಾಜ್ಕುಮಾರರ ಮುಖವೇ ಮೂಡುವುದು

ಇದೇ ಸಂದರ್ಭದಲ್ಲಿ ನನ್ನ ಗೆಳೆಯ ಜಯಂತರ ಸುಂದರ ನಿಮಗಾಗಿ
"While my history text books taught me about we Indians being ruled by foreign Mughals for 300 years in 5 chapters, Dr.Raj's movies taught me about the glorious vijayanagar empire that ruled entire South India for 400 years in 3 hrs,"


Friday, February 7, 2014

ನೀನು 'RSS'ನವನೆನಪ್ಪಾ ?


                ಹೀಗೆ ಯಾವುದಕ್ಕೋ ಉಚಿತವಾಗಿ ಸಿಕ್ಕಿದ್ದ ,ಮನೆಯಲ್ಲಿ ಉಪಯೋಗಿಸದೆ ಬಿದ್ದಿದ್ದ ಹಳೇ ಕೈಗಡಿಯಾರವೊಂದನ್ನು ಸರಿಮಾಡಿಸಲು ನೆನ್ನೆ ಸಂಜೆ ಒಂದು ಅಂಗಡಿಗೆ ಹೋಗಿದ್ದೆ. ಅದನ್ನು ನಾನು ಉಪಯೋಗಿಸದೆ ಇದ್ದುದಕ್ಕೆ ಬಹು ಮುಖ್ಯ ಕಾರಣ , ಅದರ 'dial' ಮೇಲೆ ಪರದೇಶಿ ಬಾವುಟವೊಂದರ ಚಿತ್ರವಿದ್ದುದು. ಅದನ್ನು ಹಾಕಿಕೊಂಡಾಗಲೆಲ್ಲ ಮೈ ಉರಿಯುತ್ತಿತ್ತು. ಅಂಗಡಿಗೆ ಹೋದವ ಮೊದಲು ಹೊಸ 'ವಿದ್ಯುತ್ ಕೋಶ'(Electric cell) ವನ್ನು ಹಾಕಲು ಹೇಳಿದೆ.
               ನಂತರ "ಒಂದು ಚೂರು ಆ 'dial' ಇರುವ ಧ್ವಜದ ಮೇಲೆ ಗೀಚಬೇಕಿತ್ತು ಅದರಮೇಲಿರುವ ಗಾಜು ತೆಗೆದುಕೊಡುವಿರಾ" ಎಂದುಕೇಳಿದೆ .ಮೊದಲಿಗೆ ಅವರಿಗೆ "ಏನು ಗೀಚಬೇಕೆ ? ? ಏಕಪ್ಪ " ಎಂದು ಕೇಳಿದರು. ವಿವರಿಸಿ ಹೇಳಿದೆ. "... ಆ ಧ್ವಜ ಇದ್ದರೆ ಹಾಕಿಕೊಳ್ಳಲು ಮನಸ್ಸೇ ಬರುವುದಿಲ್ಲ" ಎಂದೆ ... ಅವರ ಮುಂದಿನ ಪ್ರಶ್ನೆ ಕೇಳಿ ದಂಗಾಯಿತು. 

                                    ನೀನು 'RSS'ನವನೆನಪ್ಪಾ ?


          
                    


                           ((ಸಾಂದರ್ಭಿಕ ಚಿತ್ರ ))ಇದೆ ರೀತಿಯ ಕೈ ಗಡಿಯಾರ
               ನಾನು ಉತ್ತರಿಸುತ್ತಾ "ಹೌದು, ನಿಮಗೇಕೆ ಹಾಗನಿಸಿತು ?" ಎಂದೇ
ಅವರು ಹೇಳಿದರು" ಇಷ್ಟೊಂದು ರಾಷ್ಟ್ರಾಭಿಮಾನ ಇನ್ನ್ಯಾರಿಗೆ ತಾನೇ ಇರುತ್ತದೆ"ಎಂದರು.
ನಾನು ಮರು ಪ್ರಶ್ನಿಸಿದೆ," ನಿಮ್ಮ ಪ್ರಕಾರ 120 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಕೇವಲ 1 ಕೋಟಿ ಇರುವ ಸ್ವಯಂಸೇವಕರಿಗೆ ಮಾತ್ರ ರಾಷ್ಟ್ರಾಭಿಮಾನ ಇರುವುದೇ ?" ಎಂದು .ಅವರ ಉತ್ತರ ಭಾರೀ ಸಂತಸ ನೀಡಿತು.
              "ನಾನೆಲ್ಲಿ ಹಾಗೆ ಹೇಳಿದೆ, ಇನ್ನುಳಿದವರಲ್ಲಿ ಕೆಲವರಿಗೆ , ಆಗಸ್ಟ್ 15, ಜನವರಿ 26, ಮಾರ್ಚ್ 23 ಮತ್ತು ಭಾರತ ವಿಶ್ವಕಪ್ ಗೆದ್ದಾಗ ಮಾತ್ರ ರಾಷ್ಟ್ರಾಭಿಮಾನ ಉಕ್ಕಿ ಬರುತ್ತದೆ. ಆದರೆ ಸಂಘದವರಿಗೆ ಮತ್ತು ಸೈನಿಕರಿಗೆ  ಮಾತ್ರ ಯಾವಾಗಲೂ ಜಾಗೃತಗೊಂಡಿರುತ್ತದೆ" ಎಂದರು.
ಒಮ್ಮೆ ನನ್ನಗೆ ಅನುಮಾನ ಬಂದುಬಿಟ್ಟಿತು , "ನಾವು ಇಷ್ಟೊಂದು ಪ್ರಶಂಸೆಗೆ ಅರ್ಹರೇ?!" ಎಂದು.

ಲಜ್ಜೆ ಗೆಟ್ಟ ಸುದ್ದಿ ಮಾಧ್ಯಮದವರು ಸಂಘ ಮತ್ತು ಭಯೋತ್ಪಾದಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿರುವ ಈ ಕಾಲದಲ್ಲೂ ನಮ್ಮ(ಸಂಘದವರ) ಕೆಲಸಗಳನ್ನು ಗುರುತಿಸಿ ಪ್ರಶಂಶಿಸುತ್ತಿರುವುದನ್ನು ಕಂಡು ಸಂತಸಗೊಂಡು, "ಸಮಯ ಮಾಡಿಕೊಂಡು ಬನ್ನಿ ಶಾಖೆಗೆ" ಎಂದು ಹೇಳಿ ಬಂದೆ ...

Wednesday, December 25, 2013

ದುರಭಿಮಾನ ಮುಕ್ತ ಅಭಿಮಾನಿಗಳ ಅವಶ್ಯಕತೆ ಇದೆ ಅಲ್ಲವೇ ?!

ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತೆ...

 ಮೊನ್ನೆ ರಾಷ್ಟ್ರ ಕವಿ ಶ್ರೀಯುತ ಶಿವರುದ್ರಪ್ಪನವರು ತೀರಿಕೊಂಡ ಕಾರಣ ಕರ್ನಾಟಕ ಸರ್ಕಾರವು ನೆನ್ನೆ (24-12-2013) ಸರ್ಕಾರಿ ರಜೆ ಘೋಷಿಸಿತು. ಪರಿಣಾಮ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಗದಿತ ಪರೀಕ್ಷೆಗಳು 4-1-2014ರವರೆಗೆ ಮುಂದೆ ಹೋಯಿತು.
            ಪರಿಣಾಮವಾಗಿ ಕೆಲವು ಭಾರತೀಯರಿಗೆ( ಕನ್ನಡಿಗರಿಗೆ ಮತ್ತು ಇತರರಿಗೆ) ಅಯ್ಯೋ ರಜೆ ಕಡಿಮೆ ಆಯಿತಲ್ಲ , ರೈಲಿಗೆ ಆರಕ್ಷಣೆ ಮಾಡಿಸಲು ವಿನಿಯೋಗಿಸಿದ್ದ ಹಣ ವ್ಯರ್ಥವಾಯಿತಲ್ಲಾ ಎಂದು ಬೇಸರವಾಯಿತು.ನಾನು ಹೇಳುತ್ತಿರುವುದು ಅವರು 
ಅದರಲ್ಲಿ ಕೆಲವರು FACEBOOKನಲ್ಲಿ ಕೆಟ್ಟದಾಗಿ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೇ ಆಕಾಶ ಕೆಳಗೆ ಬಿದ್ದವರಂತೆ ಆಡುವುದೇ ?
 
'ನಮ್ಮ ಸಾಂಸ್ಕೃತಿಕ' ಪದಗಳನ್ನು ಉಪಯೋಗಿಸಿ ಬೈದಿದ್ದೇನು ,ಅವನ್ನನ್ನು ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತ ರೋಷ ಪೂರಿತ Comment ಮಾಡಿದ್ದೇನು   ... ಅಬ್ಬಬ್ಬಬ್ಬಾ.....

            ನಿಮ್ಮಲ್ಲೇ ಎಷ್ಟು ಜನರಿಗೆ ಶಿವರುದ್ರಪ್ಪನವರ ಕೃತಿಗಳ ಬಗ್ಗೆ 5 ಪೈಸೆಯಷ್ಟು ಜ್ಞಾನ ಇದೆ ?

ಎಷ್ಟು ಜನ ಶಿವರುದ್ರಪ್ಪನವರ ಜೀವನದ ಬಗ್ಗೆ ಓದಿದ್ದೀರಾ ? ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಿದ್ದೀರಾ ?
ಇವೆಲ್ಲವುಗಳಲ್ಲಿ ಒಂದುನ್ನು ಮಾಡಿ , ಕನ್ನಡಕ್ಕೆ ನಿಮ್ಮ ಸೇವೆ ಹೆಚ್ಚುತ್ತದೆ . ಅದು ಬಿಟ್ಟು ಥೂ ನಾಚಿಕೆಯಾಗಬೇಕು ನಿಮ್ಮ ವರ್ತನೆಗೆ.  
            ಬಹುಶಹ 1995-96ರ ನಂತರ ಕರ್ನಾಟಕದಲ್ಲಿ ಹುಟ್ಟು ಬೆಳೆದ ಅಥವಾ ಸಾಹಿತ್ಯಾಸಕ್ತಿ ಇರದ ಕನ್ನಡಿಗರಿಗೆ ಶಿವರುದ್ರಪ್ಪನವರ ಹೆಸರು ಹೊಸದಿರುವಾಗ , ಎಲ್ಲೋ ಉತ್ತರ ಭಾರತದಲ್ಲಿ ಓದಿ ಬೆಂಗಳೂರಿಗೆ ಬಂದಿರುವವರಿಗೆ ಅವರ ಹೆಸರು, ಅವರ ಘನತೆ ಹೇಗೆ ಗೊತ್ತಾಗಬೇಕು ಹೇಳಿ ?
            ನಾನು ಹೇಳುತ್ತಿರುವುದು, ಅವನದು ಏನು ತಪ್ಪಿಲ್ಲ ಎಂದಲ್ಲ. ಅವನು ತಪ್ಪು ಮಾಡಿದ್ದಾನೆ, ಕ್ಷಮೆ ಕೇಳಿದ್ದಾನೆ .. ಬಿಟ್ಟು ಬಿಡಿ.. ಅದೇ ನಮಗೆ ಶೋಭೆ.


ಗುಬ್ಬಿಯ ಮೇಲೆ ಬ್ರಂಹಾಸ್ತ್ರವೇ ?

ಎರಡು ದಿನಗಳ ಹಿಂದೆ ನಾವೇ ನೋಡಿದಂತೆ ಕನ್ನಡ ಸಾಹತ್ಯ ಪರಿಷತ್ತಿನವರು ಸರ್ಕಾರಿ ಹಣವಿಲ್ಲದೆ ಒದ್ದಾಡುತ್ತಿದೆ . ಸಚಿವೆ ಉಮಾಶ್ರೀಯವರಿಗೆ ಕೇಳಿದರೆ ಸಂಭಂದವೇ ಇಲ್ಲವೆಂಬಂತೆ ಮಾತನಾಡಿದರು. ನಿಮಗೆ ನಿಜವಾಗಲೂ ಕನ್ನಡದ ಬಗ್ಗೆ ಆಸ್ಥೆ ಇದ್ದರೆ ಇದರ ಬಗ್ಗೆ ಮಾತಾಡಿ. ಅದು ಬಿಟ್ಟು ಒಬ್ಬ ಸಾಮಾನ್ಯ ಮನುಷ್ಯನ ವಿರುದ್ದ ಎಲ್ಲರೂ ಸೇರಿ ಕಿರಚಾಡುವುದೇ ? ನಾಚಿಕೆ ಪಡಿ ನಿಮ್ಮನ್ನು ನೋಡಿಕೊಂಡು .
              
(ಆಯುಷ್ ಮೇಲೆ change.org ನಲ್ಲಿನ ದಾವೆ)



ಕೊನೆಯದಾಗಿ ನಾನು ಹೇಳುವುದು ಇಷ್ಟೇ , ದಯವಿಟ್ಟು ನಿಮ್ಮ ಇದೆ ರೋಷವನ್ನು,ಕಿಚ್ಚನ್ನು , ಪೌರುಶತ್ವವನ್ನು ನಮ್ಮ ಸೈನಿಕರ ತಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ಪಾಕಿಸ್ತಾನ ಹಾಗೂ ಚೀನಾ ವಿರುದ್ದವೂ ತೋರಿಸಿ. ಆಗ ನಿಮ್ಮ ಆ ಗುಣಗಳು ನಿಮ್ಮಲ್ಲಿರುವುದಕ್ಕೆ ಸಾರ್ಥಕತೆ ಸಿಗುತ್ತದೆ.